ಸೋಮವಾರ, ಸೆಪ್ಟೆಂಬರ್ 20, 2010

ಗೆಳೆಯ !!!

ಎಲ್ಲರಂತಲ್ಲಾ ನನ್ನ ಗೆಳೆಯ

ಒಂದಿನ ಮಾತಾಡಿದರೆ

ನಾಲ್ಕು ದಿನ ಮೌನದಿಂದಿರುವ

ಎಲ್ಲರೊಂದಿಗೆ ಹೊಂದಿಕೊಳ್ಳುವ

ಕಷ್ಟ-ಸುಖ ಹಂಚಿಕೊಳ್ಳುವ

ಬೇರೆಯವರ ಕಷ್ಟಕ್ಕೆ ಸ್ಪಂದಿಸುವ

ನನ್ನ ಕಂಡರೆ ಮಾತ್ರ ಯಾಕೆ ದೂರ ಸರಿಯುವಾ!!!

38 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ನಿಮ್ಮ ಗೆಳೆಯನ weakness ಹಿಡಿದಿಟ್ಟುಕೊಳ್ಳಿ.....ಆಗ ಎಲ್ಲೂ ಹೋಗಲ್ಲ....

ಅನಂತ್ ರಾಜ್ ಹೇಳಿದರು...

ಮಾತು ಬೆಳ್ಳಿ, "ಮೌನ ಬ೦ಗಾರ" ವೆ೦ಬ ಅರಿವಿರಬೇಕು ಗೆಳೆಯನಿಗೆ..! ಬ೦ಗಾರದ ಬೆಲೆ ತುಟ್ಟಿಯಾದ೦ತೆ ಮೌನವಿರುವ ಕಾಲವು ಹೆಚ್ಚಾಗಿದಿರಲಿ..!

ಶುಭಾಶಯಗಳು
ಅನ೦ತ್

prabhamani nagaraja ಹೇಳಿದರು...

'ಎಲ್ಲರ೦ತಲ್ಲವಲ್ಲಾ...! ಅದಕ್ಕೆ ಹಾಗೆ! ನಿಮ್ಮ ಹನಿಗವನ ಚೆನ್ನಾಗಿದೆ. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.

balasubramanya ಹೇಳಿದರು...

ಹನಿಗವನ ಚೆನ್ನಾಗಿದೆ. ಇನ್ನಷ್ಟು ನಿಮ್ಮಿಂದ ಹೊರಬರಲಿ.

ಮನಮುಕ್ತಾ ಹೇಳಿದರು...

ಚೆನ್ನಾಗಿದೆ..:)

ದಿನಕರ ಮೊಗೇರ ಹೇಳಿದರು...

ಶಶಿ ಮೇಡಮ್,
ಹೌದಾ.....?
ಕವನದ ಭಾವದಲ್ಲಿ ದೂರು ಇದೆ... ಪ್ರೀತಿನೂ ಇದೆ..... ಚೆನ್ನಾಗಿದೆ

Manju M Doddamani ಹೇಳಿದರು...

"ನಿಮ್ಮನ್ನ ಕಂಡರೆ ಮಾತ್ರ ಯಾಕೆ ದೂರ ಸರಿಯುತ್ತಾರೆ ಅಂತ ಅವರನ್ನ ಕೇಳಿ ಬಿಡಿ" ಚುಟುಕು ಚನ್ನಾಗಿದೆ ಮೇಡಂ

Shashi jois ಹೇಳಿದರು...

ಮಹೇಶ್

ನಿಮ್ಮ ಉತ್ತಮ ಸಲಹೆ & ಕಾಳಜಿಗೆ ಧನ್ಯವಾದಗಳು.
ಆದ್ರೆ ಏನು ಮಾಡಲಿ ಅವನು ನನ್ನ ಕಲ್ಪನೆಯ ಗೆಳೆಯ ಹ್ಹಾ ಹ್ಹಾ ಹ್ಹಾ
ಎಲ್ಲಿ ಅಂತ ಹುಡುಕಲಿ ಹಿಡಿದಿಟ್ಟುಕೊಳ್ಳಲು .(ಮುಂದೆನಿಮ್ಮ ಐಡಿಯಾ ಉಪಯೋಗಕ್ಕೆ ಬರಬಹುದೇನೋ)

Shashi jois ಹೇಳಿದರು...

ಅನಂತ ರಾಜ್

ಪ್ರಭಾಮಣಿ

ಬಾಲು ಸರ್

ಮನಮುಕ್ತ ಮೇಡಂ

ನಿಮ್ಮ ಅನಿಸಿಕೆಗಳಿಗೆ ತುಂಬಾ ಧನ್ಯವಾದಗಳು..

ಶಿವಪ್ರಕಾಶ್ ಹೇಳಿದರು...

swalpa dabayisi keLi... en vishya anta... :P

Shashi jois ಹೇಳಿದರು...

ದಿನಕರ್ ಸರ್
ಪ್ರೀತಿ ಇದ್ದಲ್ಲಿ ತಾನೇ ದೂರು ಬರೋದು..
ತಮ್ಮ ಅನಿಸಿಕೆಗೆ ಧನ್ಯವಾದಗಳು

ಮಂಜು,
ಸಿಕ್ಕಿದರೆ ಕೇಳಬಹುದಿತ್ತು... ಏನು ಮಾಡ್ಲಿ ನನ್ನ ಕಲ್ಪನೆಯ ಗೆಳೆಯ ಅವನು..
ಧನ್ಯವಾದಗಳು

Shashi jois ಹೇಳಿದರು...

ಶಿವೂ ಆಯ್ತು ಕಣೋ..

ದಬಾಯಿಸಲು ನನ್ನ ಜೊತೆಗೆ ನಿನ್ನನ್ನು ಕರೆದೊಯ್ಯುವೆ ಬರುತ್ತಿಯ ತಾನೇ!!!!

ಪ್ರಗತಿ ಹೆಗಡೆ ಹೇಳಿದರು...

ಚೆನ್ನಾಗಿದೆ ಶಶಿಅವರೇ ನಿಮ್ಮ ಚುಟುಕು.. ಭಯ ಇರ್ಬೇಕು ನಿಮ್ಮನ್ ಕಂಡ್ರೆ.. :-)

ನಾಗರಾಜ್ .ಕೆ (NRK) ಹೇಳಿದರು...

ishtondu sundaravaagi kelidre, uttara sigodu kashta madam . . . !

ಮನದಾಳದಿಂದ............ ಹೇಳಿದರು...

ಶಶಿ ಅಕ್ಕ,
ನೀವು ಅವರಿಗೆ ತಿಳಿಯದಂತೆ ಹಿಂಬಾಲಿಸಿ ತಿಳಿದುಕೊಳ್ಳಿ, ಇಲ್ಲವಾದರೆ ಮನ ಹೊಕ್ಕು ಅರಿಯಿರಿ........!
ಚೆನ್ನಾಗಿದೆ.

shivu.k ಹೇಳಿದರು...

ನಿಮ್ಮನ್ನು ಕಂಡರೆ ಯಾಕೆ....
ಅದರ ಗುಟ್ಟು ತಿಳಿದುಕೊಳ್ಳಿ....ಅದಕ್ಕಾಗಿ ಬೇಕಾದರೆ ನನ್ನ ಕ್ಯಾಮೆರಾ ಸಹಾಯಕ್ಕಿದೆ.

Shashi jois ಹೇಳಿದರು...

ಪ್ರಗತಿ
ನಿಮ್ಮ ಮಾತು ನಿಜವಿರಬಹುದು.

ನಾಗರಾಜ್
ದಭಾಯಿಸಿ ಕೇಳಲು ಬರೋದಿಲ್ಲ ನನಗೆ .

ಪ್ರವೀಣ್
ನೀವು ಹೇಳಿದ ಹಾಗೇ ಮಾಡುವುದೇ ಒಳ್ಳೆಯದು ಅಂತ ಎನಿಸುತ್ತಿದೆ ಈಗ ಹಹಹಹ


ಶಿವೂ ಸರ್
ನಿಮ್ಮ ಸಹಾಯಕ್ಕಿಂತ ನಿಮ್ಮ ಕ್ಯಾಮರದ ಸಹಾಯ ಬೇಕಾಗಬಹುದೇನೋ ಅಂತ ಅನಿಸುತ್ತಿದೆ.ಹ್ಹಾ ಹ್ಹಾ ಹ್ಹಾ

ಮನಸಿನಮನೆಯವನು ಹೇಳಿದರು...

ಹೌದೇನು..?

ನಿಮ್ಮ "ಸ್ಕೂಟಿ.." ಇತ್ತೀಚಿಗೆ ನನ್ನ ಮೊಬೈಲ್ ಫೋನ್ ಗೆ ಫಾರ್ವರ್ಡ್ ಆಗಿ ಬಂದಿತ್ತು

ಜಲನಯನ ಹೇಳಿದರು...

ಅಯ್ಯೋ ಪಾಪ ಹೀಗೆ ಮಾಡ್ೋದೇ ಈ ಗೆಳೆಯರು...ಬುದ್ಧಿ ಹೇಳೋಕೆ ಯಾರೂ ಇಲ್ವಾ ಇವ್ರಿಗೆ...ಛೇ...

Badarinath Palavalli ಹೇಳಿದರು...

ಬಹಳ ಸರಳವಾಗಿ ಪ್ರಿಯತಮೆಯನ್ನು ಬಣ್ಣಿಸುವ ಕವನ. ಶಭಾಷ್.

Ittigecement ಹೇಳಿದರು...

ಶಶಿಯವರೆ...

ಗೆಳೆಯ ಹಾಗೇಯೇ ಇರಬೇಕು..
ಹಾಗಿದ್ದರೇನೇ... ಮಜಾ.. !!
ನೀವು ಹೇಳಿದ್ದಕ್ಕೆಲ್ಲ ತಲೆ ಹಾಕುತ್ತಿದ್ದರೆ..
ಅವನು ಗೆಳೆಯನಾಗುವದಿಲ್ಲ..
ಬಹುಷಃ ಪತಿಯೆನಿಸಿಬಿಡುತ್ತಾನೆ.. ಹ್ಹಾ..ಹ್ಹಾ.. !!

ತಮಾಶೆಗೆ ಹೇಳಿದ್ದು..

ಚೆನ್ನಾಗಿದೆ ನಿಮ್ಮ ಸಾಲುಗಳು..
ಅಭಿನಂದನೆಗಳು...

SATISH N GOWDA ಹೇಳಿದರು...

ಸುಂದರ ಸಾಲುಗಳು, ಅದ್ಬುತ ಕಲ್ಪನೆ, ಸುಮಧುರ ಸಾಹಿತ್ಯ ,,,,,,
ಮೇಡಂ ನಾನು ನಿಮ್ಮ ಬ್ಲಾಗಿಗೆ ಇದೆ ಮೊದಲ ಬೇಟಿ ಸುಂದರ ನಿಮ್ಮ ಕವೊತೆಗಳನ್ನು ಕಂಡ ನನ್ನೀ ಮನಸು ಮೃದುವಾಗಿದೆ ಕವಿತೆಗಳು ತುಂಬಾ ಚನ್ನಾಗಿ ಮೊಡಿ ಬಂದಿವೆ , ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬೇಟಿ ನೀಡಿ . ನಾನು ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ

SATISH N GOWDA
ನನ್ನ ಬ್ಲಾಗ್ : ನನ್ನವಳಲೋಕ
http://nannavalaloka.blogspot.com
ನನ್ನ ಸ್ನೇಹಲೋಕ :(orkut)
satishgowdagowda@gmail.com

ranirao ಹೇಳಿದರು...

ಅಷ್ಟು ಒಳ್ಳೆಯ ಗೆಳೆಯ ಯಾರು ???

Shashi jois ಹೇಳಿದರು...

ಅಜಾದ್ ಸರ್

ಗೆಳೆಯನಿಗೆ ಬುಧ್ಹಿ ಹೇಳೋಕೆ ಬರ್ತಿರಾ!!!

ಬದ್ರಿನಾಥ್ ಸರ್

ಸತೀಶ್ ಧನ್ಯವಾದಗಳು.

ಪ್ರಕಾಶ್ ಅವ್ರೆ,

ನಿಮ್ಮ ಮಾತು ನಿಜ

ಗೆಳತಿ ಕೂಡ ಹಾಗೇ ಇದ್ದರೆ ಗೆಳೆಯ ಒಪ್ಪುವನೆ!!!

ನಾನು ಕೂಡ ತಮಾಷೆ ಮಾಡಿದೆ..
ಮೆಚ್ಚಿದ್ದಕ್ಕೆ ಧನ್ಯವಾದಗಳು

Shashi jois ಹೇಳಿದರು...

ರಾಣಿ
ಅವನು ಯಾರು ಅಂತ ನಾನು ಕೂಡ ಹುಡುಕುತ್ತಿದ್ದೇನೆ ನಿಂಗೆ ಸಿಕ್ಕಿದರೆ ಹೇಳು ಆಯ್ತಾ ಹ್ಹಾ ಹ್ಹಾ ಹ್ಹಾ .

*ಚುಕ್ಕಿ* ಹೇಳಿದರು...

ಬಹಳ ಪ್ರೀತಿಸುವ ಪ್ರೆಮಿಯಲ್ಲಿ ಬಹಳಷ್ಟು ಮುನಿಸಿರುತ್ತದೆ. ಅಸ್ಟೇ. ಸುಂದರ ಸಾಲುಗಳು. ಆ ಹುಡುಗನ ಬಳಿ ಹೇಳಿ ಸುಮ್ಮನೆ ನಸುನಕ್ಕೂ ಇನ್ನುಮುಂದೆ ನಿಮ್ಮನ್ನು ಬಿಟ್ಟಿರಲಾರ.

V.R.BHAT ಹೇಳಿದರು...

patrode tinnalu hoguttirabeku, jaasti patrode maadbedi! aaga hattirave iruttaane, chennaagide!

ಹಳ್ಳಿ ಹುಡುಗ ತರುಣ್ ಹೇಳಿದರು...

hmmmm swalpa dina hage ri... avare bartare inde wait madi aste..... :)

Shashi jois ಹೇಳಿದರು...

ಚುಕ್ಕಿ

ತರುಣ್

ಧನ್ಯವಾದಗಳು..

ಭಟ್ರೇ ನಿಮ್ಮ ಮಾತನ್ನು ಗಮನದಲ್ಲಿ ಇಡ್ತೀನಿ ಆಯ್ತಾ ಹ್ಹಾ ಹ್ಹಾ ಹ್ಹಾ ಹ್ಹಾ
ನನಗೆ ತಿಳಿದ ಹಾಗೆ ಪತ್ರೋಡೆ ತಿಂದರೆ ಜಾಸ್ತಿ ಮಾತಾಡಬೇಕಲ್ವಾ!!!! .

Unknown ಹೇಳಿದರು...

ಸಮ್ಮಿಶ್ರವಾದ ಚುಟುಕ. ಚೆನ್ನಾಗಿದೆ

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಉತ್ತಮ ಚುಟುಕು..
ಚೆನ್ನಾಗಿದೆ.

Shashi jois ಹೇಳಿದರು...

ಕೃಷ್ಣ ಭಟ್, ವೆಂಕಟಕೃಷ್ಣ
ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು..

ಸಾಗರದಾಚೆಯ ಇಂಚರ ಹೇಳಿದರು...

hahhaha, chennagide

ಚಿನ್ನುಡಿ..... ಹೇಳಿದರು...

ಪ್ರೀತಿಗೆ ಭಾವನೆಗಳೇ ಸಂಗಾತಿ ಅಲ್ಲವೇ...!!!!??
ಪ್ರೀತಿಯ ಭಾವನೆಗಳು ಹೃದಯದಾಳದಿಂದ ಲೇಖನಿಗೆ ಸುಂದರವಾಗಿ ಹರಿದಿದೆ...ಸದಾ ಹರಿಯುತ್ತಿರಲಿ..
ಧನ್ಯವಾದಗಳು...
ಪ್ರೀತಿಯಿಂದ.......
ಸಂತೋಷ ಭಟ್ಟ

KalavathiMadhusudan ಹೇಳಿದರು...

ಹನಿಗವನ ಸರಳವಾಗಿದ್ದರು ಸಕತ್ ಆಗಿದೆ ಮೇಡಂ ಅಭಿನಂದನೆಗಳು

Shashi jois ಹೇಳಿದರು...

ಗುರು,
ಸಂತೋಷ್
ಪ್ರಭ

ಓದಿ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು..

ಸೀತಾರಾಮ. ಕೆ. / SITARAM.K ಹೇಳಿದರು...

ಸ್ವಲ್ಪ ಅಡ್ರೆಸ್ ಕೊಡಿ ನಿಮ್ಮ ಗೆಳೆಯನದು -ಸ್ವಲ್ಪ ವಿಚಾರಿಸಿಕೊಳ್ತ್ಹೇನೆ...

Shashi jois ಹೇಳಿದರು...

ಹ್ಹ ಹ್ಹಾ ಹ್ಹಾ ನನಗೆ ಗೊತ್ತಿದ್ದರೆ ತಾನೇ ನಿಮಗೆ ಹೇಳೋದು ಸರ್.