ಶುಕ್ರವಾರ, ಮಾರ್ಚ್ 12, 2010

ಮೇರಿ - ದಾರಿ

ಒಹ್ ನನ್ನ ಮೇರಿ


ನಿನಗಾಗಿ ತಂದಿರುವೆ ಒಂದು ಸ್ಯಾರಿ


ಅದನ್ನು ಕೊಡಲು ಬಂದೆ ನಿಮ್ಮನೆ ಕಂಪೌಂಡ್ ಹಾರಿ


ಆದ್ರೆ ನಿಮ್ಮಪ್ಪ ತೋರಿಸಿದನಲ್ಲೇ ಹಾಸ್ಪಿಟಲ್ ದಾರಿ. ...!!!!!!!

ಸೋಮವಾರ, ಮಾರ್ಚ್ 8, 2010

'ರೀಲ್"


ಗಿಡ ಬಾಡಿದರೆ ನೀರು ಬಿಡುವೆನು .

ಹೃದಯ ಬಾಡಿದರೆ ಕಣ್ಣೀರು ಬಿಡುವೆನು.

ನೀವು ಬಾಡಿದರೆ ಜೀವವನ್ನೇ ಬಿಡುವೆನು.

ನೀವು ಖುಷಿಯಾಗಿರಲು ಆಗಾಗ ಈ ಥರ.

ಸಣ್ಣ "ರೀಲ್" ಬಿಡುವೆನು!!!!!

ಮಂಗಳವಾರ, ಮಾರ್ಚ್ 2, 2010

ಜೀವನದ ನೀತಿ ಸೂತ್ರಗಳು
*************************

ಗುಣವಿಲ್ಲದಿದ್ದರೆ ರೂಪ ವ್ಯರ್ಥ
ನಮ್ರತೆ ಇಲ್ಲದಿದ್ದರೆ ವಿದ್ಯೆ ವ್ಯರ್ಥ
ಉಪಯೋಗಿಸದಿದ್ದರೆ ಧನ ವ್ಯರ್ಥ
ಹಸಿವೆ ಇಲ್ಲದಿದ್ದರೆ ಭೋಜನ ವ್ಯರ್ಥ
ಗುರಿಯಿಲ್ಲದಿದ್ದರೆ ಸಾಧನೆ ವ್ಯರ್ಥ
ಪರಮಾತ್ಮನ ಅರಿವಿಲ್ಲದಿದ್ದರೆ ಜೀವನವೇ ವ್ಯರ್ಥ

ಕ್ರೋಧ ಬುಧ್ಹಿಯನ್ನು ತಿನ್ನುತ್ತದೆ
ಅಹಂಕಾರ ಜ್ಞಾನವನ್ನು ತಿನ್ನುತ್ತದೆ
ಪ್ರಾಯಶ್ಚಿತ್ತ ಪಾಪವನ್ನು ತಿನ್ನುತ್ತದೆ
ಮೋಹ ಮರ್ಯಾದೆಯನ್ನು ತಿನ್ನುತ್ತದೆ
ಲಂಚ ಗೌರವವನ್ನು ತಿನ್ನುತ್ತದೆ
ಚಿಂತೆ ಆಯುಷ್ಯವನ್ನು ತಿನ್ನುತ್ತದೆ
******************************