ಮಂಗಳವಾರ, ಮಾರ್ಚ್ 2, 2010

ಜೀವನದ ನೀತಿ ಸೂತ್ರಗಳು
*************************

ಗುಣವಿಲ್ಲದಿದ್ದರೆ ರೂಪ ವ್ಯರ್ಥ
ನಮ್ರತೆ ಇಲ್ಲದಿದ್ದರೆ ವಿದ್ಯೆ ವ್ಯರ್ಥ
ಉಪಯೋಗಿಸದಿದ್ದರೆ ಧನ ವ್ಯರ್ಥ
ಹಸಿವೆ ಇಲ್ಲದಿದ್ದರೆ ಭೋಜನ ವ್ಯರ್ಥ
ಗುರಿಯಿಲ್ಲದಿದ್ದರೆ ಸಾಧನೆ ವ್ಯರ್ಥ
ಪರಮಾತ್ಮನ ಅರಿವಿಲ್ಲದಿದ್ದರೆ ಜೀವನವೇ ವ್ಯರ್ಥ

ಕ್ರೋಧ ಬುಧ್ಹಿಯನ್ನು ತಿನ್ನುತ್ತದೆ
ಅಹಂಕಾರ ಜ್ಞಾನವನ್ನು ತಿನ್ನುತ್ತದೆ
ಪ್ರಾಯಶ್ಚಿತ್ತ ಪಾಪವನ್ನು ತಿನ್ನುತ್ತದೆ
ಮೋಹ ಮರ್ಯಾದೆಯನ್ನು ತಿನ್ನುತ್ತದೆ
ಲಂಚ ಗೌರವವನ್ನು ತಿನ್ನುತ್ತದೆ
ಚಿಂತೆ ಆಯುಷ್ಯವನ್ನು ತಿನ್ನುತ್ತದೆ
******************************

4 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ಶಶಿ,
ಬ್ಲಾಗ್ ಲೋಕಕ್ಕೆ ಸ್ವಾಗತ....
ಚೆನ್ನಾಗಿದೆ ನೀತಿ ಸೂತ್ರಗಳು....
ಬ್ಲಾಗ್ ಮುಂದುವರಿಸಿ....
ಶುಭವಾಗಲಿ......

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಕಲರ್ ಕಲರ್..
ಬರಹ.
ಚೆನ್ನಾಗಿದೆ.
ಬ್ಲಾಗ್ ಲೊಕಕ್ಕೆ ಸ್ವಾಗತ.
ಬರಹಗಳು ಚಿಂತನಾಪೂರ್ಣವಾಗಿ,ಗಂಭೀರವಾಗಿ ಬರಲೆಂದು
ಮನದಾಳದ ಹಾರೈಕೆ.

V.R.BHAT ಹೇಳಿದರು...

ಪ್ರತಿಕ್ರಿಯೆಯ ಜೊತೆಗೆ ಅವುಗಳ ಅಳವಡಿಕೆ ತುಂಬಾ ವಿಹಿತ ಅನ್ನಿಸುತ್ತಿದೆ, ನಿಮ್ಮ ಬ್ಲಾಗ್ ನಲ್ಲಿ ಈ ಪ್ರಸ್ತುತಿ ಚೆನ್ನಾಗಿದೆ, ಧನ್ಯವಾದಗಳು

Shashi jois ಹೇಳಿದರು...

ಮಹೇಶ್,
ವೆಂಕಟ ಕೃಷ್ಣ ಮತ್ತು
ಭಟ್ಟರೇ,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.