ಶನಿವಾರ, ಜನವರಿ 29, 2011

ಕನಸು - ನನಸು !!!!


ನಿದ್ದೆಗೆ ಜಾರಿದರೆ 


ಕನಸಲ್ಲಿ ನೀ ನನ್ನ ಬಳಿಗೆ !!!!


ನಿದ್ದೆಯಿಂದ ಎದ್ದರೆ 


ಮಂಚದಿಂದ ನಾ ಕೆಳಗೆ!!!!

ಸೋಮವಾರ, ನವೆಂಬರ್ 29, 2010

ಕನ್ಯೆ - ಕೆನ್ನೆ !!!!ನನ್ನ ಕನಸಿನ ಕನ್ಯೆ   

ನಿನ್ನ ನೆನಪಿಸಿಕೊಂಡೆ ನಿನ್ನೆ 

ನನ್ನ ನೆನಪಿಲ್ಲವೇ ಮನದನ್ನೆ 

ನಿನ್ನ ನೋಡಿ ಮಾಡಿದೆ ಕಣ್ಸನ್ನೆ 

ನೀ ಬೀಸಿದ ಹೊಡೆತಕ್ಕೆ ಊದಿತು ಕೆನ್ನೆ 

ಪ್ರೇಮ-ಪರೀಕ್ಷೆಯಲ್ಲಿ ಸಿಕ್ಕಿತು ದೊಡ್ಡ-ಸೊನ್ನೆ !!!!!!

ಬುಧವಾರ, ಅಕ್ಟೋಬರ್ 20, 2010

ಸ್ನೇಹ-ಪ್ರೀತಿ ....
ಮನ ಕರಗಿತು ನಿನ್ನ ಪರಿಚಯ ಆದಾಗ


ಅರಿಯದೆ ಪ್ರೀತಿಸಿದೆ ನಿನ್ನ ಸ್ನೇಹವಾದಾಗ


ಗೊತ್ತಾಗದೆ ನಾ ಕಾದೆ ನಿನ್ನ ಪ್ರೀತಿಗಾಗಿ


ಆದ್ರೆ ಕಣ್ಣ
ಲ್ಲಿ
ನೀರು ಬಂತು


ನನ್ನ ಅಗಲಿ ನೀ ದೂರ ಸರಿದಾಗ!!!!!!!!!


ಸೋಮವಾರ, ಸೆಪ್ಟೆಂಬರ್ 20, 2010

ಗೆಳೆಯ !!!

ಎಲ್ಲರಂತಲ್ಲಾ ನನ್ನ ಗೆಳೆಯ

ಒಂದಿನ ಮಾತಾಡಿದರೆ

ನಾಲ್ಕು ದಿನ ಮೌನದಿಂದಿರುವ

ಎಲ್ಲರೊಂದಿಗೆ ಹೊಂದಿಕೊಳ್ಳುವ

ಕಷ್ಟ-ಸುಖ ಹಂಚಿಕೊಳ್ಳುವ

ಬೇರೆಯವರ ಕಷ್ಟಕ್ಕೆ ಸ್ಪಂದಿಸುವ

ನನ್ನ ಕಂಡರೆ ಮಾತ್ರ ಯಾಕೆ ದೂರ ಸರಿಯುವಾ!!!

ಗುರುವಾರ, ಜುಲೈ 29, 2010

"ಪ್ರೇಮ - ಪತ್ರ "


ನಿನಗೆ ನಾ ಬರೆದೆ ಪ್ರೇಮಪತ್ರ

ತಲುಪಿತು ಪ್ರಿನ್ಸಿಪಾಲ್ ಹತ್ರ

ಮರು ಕ್ಷಣ ಬಂತು ಟಿ.ಸಿ ಪತ್ರ

ತಲೆ ಕೆಳಗಾಯ್ತು ನನ್ನ ಸೂತ್ರ

ಆಗಿಲ್ಲ ಪ್ರೇಮಯಾನ ಸುಸೂತ್ರ

ನೀ ಹೇಳ ಬೇಡ್ವೆ ಯಾರ ಹತ್ರ

ನಗು ಆದರೆ ಸ್ವಲ್ಪ ಮಾತ್ರ!!

ಬುಧವಾರ, ಜೂನ್ 2, 2010

ಸೂಟಿ- ಸ್ಕೂಟಿ !!!!!!


ನಾನು ಭಾರಿ ನಾಟಿ

ಒಮ್ಮೆ ಕಂಡೆ ಒಂದು ಬ್ಯೂಟಿ

ಏರುತ್ತಿದ್ದಳು ಹೊಸ ಸ್ಕೂಟಿ

ಹಿಂದೆ ಹಿಂದೆ ಹೋದೆ ಆ ಪಾಟಿ

ವಾಪಸ್ ಬಂದಾಗ ನನಗಿಲ್ಲ ಯಾರು ಸಾಟಿ

ಯಾಕೆ ಗೊತ್ತಾ!!ಆ ಘಾಟಿ

ಕೊಟ್ಟ ಏಟಿನ ಚಾಟಿ

ನಾ ಹಾಕಿದ್ದೆ 1 ವಾರ ಸೂಟಿ...!!!!!!

ಶನಿವಾರ, ಮೇ 15, 2010

ಸಿನಿಮಾ ಟಾಕೀಸ್ ನಲ್ಲಿ!!!ಹೆಂಡತಿ ಕೋಪಿಸಿಕೊಂಡಾಗ

ರಜಾ ಇದ್ದರೂ ನಾನಾಗ ಆಫೀಸ್ ನಲ್ಲಿ !! !!!!

ಕೋಪ ಕರಗಿ ಸೌತೆಕಾಯಿ ಯಾದಾಗ

ಕೆಲಸವಿದ್ದರೂ ನಾವೀಗ

ಸಿನಿಮಾ ಟಾಕೀಸ್ ನಲ್ಲಿ !!!!!